Thursday 26 January 2017

ಯಾಣ,ಒಂದು ಪ್ರವಾಸ ಕಥನ;



ಬಹಳ ದಿನಗಳಿಂದ ಯಾಣ ನನ್ನ ಟ್ರಾವೆಲ್ wishlist ನಲ್ಲಿತ್ತು.

ಪ್ರತಿಸಾರಿ "ನಮ್ಮೂರ ಮಂದಾರ ಹೂವೆ"  ಚಿತ್ರದ ತುಣುಕುಗಳನ್ನ ಯೌಟ್ಯೂಬ್ ನಲ್ಲಿ ನೋಡಿದಾಗ ಯಾಣ ಹೋಗಲೇ ಬೇಕು ಅನ್ನುವ ಆಸೆ ಮತ್ತೆ ಮೂಡುತಿತ್ತು.

ಡಿಸೆಂಬರ್ 2016 , ವರ್ಷದ ಕೊನೆ ತಿಂಗಳು , ಕ್ರಿಸ್ಮಸ್ ರಜೆ.
ತಿಂಗಳ ಕೊನೆ ವಾರ ಆಗಿರುವದರಿಂದ ಅಕೌಂಟಲ್ಲಿ ದುಡ್ಡು ಇರಲ್ಲಿಲ್ಲ ,ಆದ್ರೆ ರಜೆ ಇರುವುದರಿಂದ ಎಲ್ಲಾದ್ರೂ ವೀಕೆಂಡ್ ಟ್ರಿಪ್ ಮಾಡುವ ಆಸೆಯಿತ್ತು . ಆಗ ಸಡನ್ ಆಗಿ ಆ ಹಳೆ ಮಾತು ನೆನಪಾಯಿತು  “ಸೊಕ್ಕಿದ್ದರೆ ಯಾಣ, ರೊಕ್ಕಿದ್ದರೆ ಗೊಕರ್ಣ”!. ಸೊ ಥಾಟ್ಸ್ ಇಟ್! ಇನ್ನೇನು ಕ್ರಿಸ್ಮಸ್ ವೀಕ್ ಯಾಣ ಪಯಣ ...

ಹೇಗೂ ನನ್ನ ಕಾಲೇಜು ಫ್ರೆಂಡ್ ಅಮಿತ್ ಮನೆ ಇರುವುದು ಮುರುಡೇಶ್ವರ ಹತ್ರ . ಅಮಿತ್ ನಾನು ಫ್ರೈಡೆ 23rd Dec ಆಫೀಸ್ ಮುಗಿಸಿ  ಸಂಜೆ  ಭಟ್ಕಳ ಬಸ್ ಹತ್ತಿದ್ವಿ .

ಶನಿವಾರ ಬೆಳ್ಳಗ್ಗೆ 7 ಗಂಟೆಗೆ ಬಸ್ಸು ಮುರುಡೇಶ್ವರ ಗೇಟ್ ತಲುಪಿತ್ತು . ಮುರುಡೇಶ್ವರನಿಂದ ಅಮಿತ ಮನೆ ಇರುವುದು ಸುಮಾರು 3 KM .
ನಾವು ಬರುವುದು ಮೊದಲೆ ಗೊತ್ತಿರುವುದರಿಂದ , ಅಮಿತ ಕಸಿನ್ ದಯಾ (ದಯಾನಂದ ) ಮೊದಲೆ ಬೈಕ್ ಜೊತೆ ವೆಲ್ಕಮ್ ಮಾಡಕ್ಕೆ ನಿಂತಿದ್ದ.
ದಯಾ ಯಾವತ್ತೂ ಹಾಗೆ.ಅವನಿಗೆ ಅಮಿತ್ ಅಂದ್ರೆ ಸ್ವಂತ ತಮ್ಮನಿಗಿಂತಲೂ ಜಾಸ್ತಿ ಪ್ರೀತಿ .
ನಾನು ಫಸ್ಟ್ ಟೈಮ್ ಅಮಿತ ಮನೆಗೆ ಬಂದಾಗಲೂ , ಫುಲ್ ಮುರುಡೇಶ್ವರ ತೋರಿಸುವುದಲ್ಲದೆ ,ನನ್ನ ಇಷ್ಟದ ತಿಂಡಿ ಅವನ ಕಯ್ಯಾರೆ ಮಾಡಿದ.
ದಯಾ ಬೈಕ್ನಲ್ಲಿ ಟ್ರಿಪ್ಪ್ಲೆ ರೈಡ್ ಮಾಡಿ ಅದೇ ಗುಡ್ಡಗಾಡಿನ ಮದ್ಯ ಸಾಗುವ ಹಳೆಯ ಕಾವಲು ದಾರಿಯಲ್ಲಿ ಹೋಗುವಾಗ,ನಾನು ಮೊದಲು ಸಲ ಬಂದ್ ನೆನಪುಗಳು ಮೆಲಕುಹಾಕುತಿದ್ದವು .

ಮಾನೆ ತಲುಪುತಿದ್ದಂತೆ , ಅಮಿತ್ ಅಣ್ಣನ ಮಕ್ಕಳಾದ ಪುಟ್ಟ, ಪುಟ್ಟಿ ತಮ್ಮ ಮುದ್ದಾದ ನಗುವಿನೊಂದಿಗೆ  ನಮ್ಮನ್ನಾ ವೆಲ್ಕಮ್ ಆಡಿದ್ರು .ಅತ್ತಿಗೆ ಮಾಡಿದ ಕರಾವಳಿ ಊಟ ಮಾಡಿ ಸಂಜೆ ನಾವು ಸ್ವಲ್ಪ ಮುರುಡೇಶ್ವರ ಸುತ್ತಾಡಿಕೊಂಡು ಬಂದ್ವಿ ..

ಪುಟ್ಟ ,ಪುಟ್ಟಿಗೆ ಕಿಂಡರ್ ಜಾಯ್ ಅಂದ್ರೆ ತುಂಬಾ ಇಷ್ಟ. ಅವರಿಬ್ಬರ ಜೊತೆ ಆಟಆಡ್ತಿದ್ರೆ ಸಮಯ ಹೋಗಿರೋದೇ ಗೊತ್ತಾಗಲ್ಲ . ಇಲ್ಲಿದೆ ಅವರ ತುಂಟ ಚಿತ್ರ.



ಶನಿವಾರ ರಾತ್ರಿ ಊಟ ಮಾಡಿ ಬೇಗ ಮಲಗಿ ನೆಕ್ಸ್ಟ್ ಡೇ ಯಾಣ ಪ್ರಯಾಣದ ಪ್ಲಾನ್ .
ನಮ್ಮ ಇ  ಪಯಣದಲ್ಲಿ ಇನ್ನೊಬ್ಬರ ಎಂಟ್ರಿ ! ಅವನು ಸಚಿನ್. 
ಸಚಿನ್ ಅಮಿತನ ಬಾಲ್ಯದ ಗೆಳೆಯ . ಅವನು ಮಂಗಳೂರಿಂದ ಮನೆಗೆ ಬಂದದ್ದು ನಮ್ಮಜೊತೆ ಯಾಣಕ್ಕೆ ಟ್ರಾವೆಲ್ ಮಾಡಲು.

ಪ್ರಯಾಣದ ಉತ್ಸುಕತೆ , ಅಲಾರಾಂ ಬಾರಿಸುವ ಮುನ್ನವೇ ನಮ್ಮನ್ನು ಎಬ್ಬಿಸುವಂತೆ ಮಾಡಿತು. ಆ ಚುಮೂ ಚುಮೂ ಚಳಿಯಲ್ಲಿ ರೆಡಿಯಾಗಿ ನಾವು 5 ಗಂಟೆಗೆ ಮುರುಡೇಶ್ವರ ಗೇಟ್ ತಲುಪಿದ್ವಿ . ನಾವು ಹೇಗಾದ್ರು ಮಾಡಿ ಬೆಳಗ್ಗೆ 7 ಗಂಟೆ ಮುಂಚೆ ಕುಮಟಾ ತಲುಪಬೇಕಾಗಿತ್ತು . ಯಾಕಂದ್ರೆ , ಕುಮಟಾ ಯಿಂದ ಯಾಣಕ್ಕೆ ಪ್ರಯಾಣಿಸಲು ಫಸ್ಟ್ ಬಸ್ಸ ಇರೋದು ಬೆಳಗ್ಗೆ 7 : 30 ಕ್ಕೆ .ನಮ್ಮ ಅದೃಷ್ಟಕ್ಕೆ , ನಮಗೆ 5 ಗಂಟೆಗೆ ಮುರುಡೇಶ್ವರನಿಂದ ಸಿಕ್ಕ ಸುಮೋ (ಟಾಟಾ ಸುಮೋ ) ನಾವು 6 ಗಂಟೆಯಷ್ಟರಲ್ಲಿ ಕುಮಟಾ ತಲುಪುವಂತೆ ಮಾಡಿತು .

ಬೇಗ ತಲುಪಿರುವಿದರಿಂದ ನಮಗೆ ಕುಮಟಾ ಬಸ್ಸ್ಟಾಪ್ ನಲ್ಲಿ ತಿಂಡಿ ತಿನ್ನುವ ಅವಕಾಶ ಸಿಕ್ಕಿತು . ತಿಂಡಿ/ಊಟ ಮಾಡಲು ಯಾಣದಲ್ಲಿ ಯಾವುದೆಹೋಟೆಲ್ ಇಲ್ಲದಿರುವುದರಿಂದ , ನಾವು ಕುಮಟಾ ಬಸ್ಸ್ಟಾಪಿನಿಂದನೆ ಸ್ವಲ್ಪ ಸ್ನ್ಯಾಕ್ಸ್ಸನ್ನ ಪಾರ್ಸೆಲ್ ಮಾಡ್ಕೊಂಡ್ವಿ .ಇಷ್ಟೆಲ್ಲ ಮಾಡುವಷ್ಟರಲ್ಲಿ ಕುಮಟಾ ಬಸ್ಸು ಯಾಣ ಪಯಣಕ್ಕೆ ರೆಡಿಯಾಗಿ ನಿಂತಿತ್ತು .

ಕುಮಟಾದಿಂದ ಸುಮಾರು 31 KM ದೂರದಲ್ಲಿ , ವೆಸ್ಟೆರ್ನ್ ಘಟ್ಸ್ ಶ್ರೇಣಿಯ ಸಹ್ಯಾದ್ರಿ ಪರ್ವತಗಳ ಮದ್ಯ ತಲೆಯೆತ್ತಿರುವ ವಿಶಾಲ ಕಾಯದ ಕಲ್ಲಿನ ಪ್ರತಿರೂಪಗಳೇ ಯಾಣದಆಕರ್ಷಣೆ . ಆ ಪ್ರತಿರೂಪಗಳನ್ನು ಭೈರವೇಶ್ವರ  ಮತ್ತು ಮೋಹಿನಿ ಶಿಖರವೆಂದು ಕರೆಯಲಾಗುತ್ತದೆ .

ರವಿಯ ಬೆಚ್ಚನೆ ಹೊಂಗಿರಣಗಳು ಛಳಿಯ ಪರದೆಯನ್ನ ಸೀಳಿ ಆ ಎತ್ತರದ ಮರಗಳ ಮಧ್ಯ ಇಣುಕಿತ್ತಿದ್ದವು . ಈ ವೆಸ್ಟರ್ನ್ ಘಟ್ಸ್ ಸುಂದರತೆಯು  ನಿಸ್ಸಾರ್ ಅಹಮ್ಮದ್ ಅವರ ನಿತ್ಯೋತ್ಸವ ಹಾಡು ನೆನಪಿಸುತಿತ್ತು .



ನಾವು ಯಾಣ ತಲುಪುವಿದರಲ್ಲಿ ಸಮಯ 10 ಗಂಟೆಯಾಗಿತ್ತು . ಬಸ್ಸು ನಿಂತ ಸ್ಥಳದಿಂದ ಸುಮಾರು 3 km ಟ್ರೆಕ್ಕಿಕಿಂಗ್ ಮಾಡಬೇಕು . ಗಡ ಗಡ ನಡಗುವ ಆ ಚಳಿಯಲ್ಲಿ ಟ್ರೆಕ್ ಮಾಡುವ ಅನುಭವವೇ ಅದ್ಭೂತ . ದಟ್ಟ ಅರಣ್ಯದಲ್ಲಿ ,ಎತ್ತರದ ಮರಗಳ ಮಧ್ಯ , ಜುಳು ಜುಳು ಹರಿಯುವ ನೀರಿನ ಸದ್ದು ನಿಮ್ಮನ್ನು ಪ್ರಕೃತಿಯು ತನ್ನ ಮಡಿಲಲ್ಲಿ ಮಲಗಿಸಿ ಜೋಗುಳ ಹಾಡಿದಂತಿರುತ್ತದೆ .








ಟ್ರೆಕ್ ಮುಗಿಯುತ್ತ ಬಂದಂತೆ ನಮಗೆ ಅದ್ಭುತ ಭೈರವೇಶ್ವರ  ಮತ್ತು ಮೋಹಿನಿ ಶಿಖರಗಳ ದರ್ಶನ ಆಗುತ್ತದೆ . ಭೈರವೇಶ್ವರ  ಸುಮಾರು 120 ಅಡಿ ಮತ್ತು ಮೋಹಿನಿ ಸುಮಾರು 90 ಅಡಿ ಎತ್ತರ . ಈ ವಿಶಾಲ ಕಾಯಗಳನ್ನು ಹತ್ತಿರದಿಂದ ನೋಡುವ ಅನುಭವವೇ ಬೇರೇ.







ಹಿಂದೂ ಧರ್ಮದ ಪ್ರಕಾರ . ಶಿವನು ಭ್ರಮಾಸುರನನ್ನು ಅಸುನೀಗಿಸಿದ ಸ್ಥಳವೇ ಯಾಣ . ಪ್ರತಿವರ್ಷ ಶಿವರಾತ್ರಿಗೆ 10 ದಿನಗಳ ಹಬ್ಬದಾಚರಣೆ ಮಾಡಲಾಗುತ್ತದೆ . ಸುಮಾರು 10 ,000  ಭಕ್ತಾದಿಗಳು ಭೈರವೇಶ್ವರನ ದರ್ಶನಕ್ಕಾಗಿ ಬರುತ್ತಾರೆ .

ಟ್ರೆಕ್ ಮಾಡಿ ಶಿಲೆಗಳು ತಲುಪುವಷ್ಟರಲ್ಲಿ ನಾವು ದಣಿದು ಬಾಯಾರಿಕೆಯಿಂದ ನರಳುತಿದ್ದಾಗ ನಮಗೆ ಕಂಡದ್ದು ಆನಂದ್ ಭಟ್ಟರ ಟೀ ಸ್ಟಾಲ್ .ಆನಂದ್ ಭಟ್ಟರು ಮಾತಾಡುವ ಸ್ಟೈಲ್ ನೋಡಿದರೆ ಗೊತ್ತಾಗುತ್ತೆ ಅವರು ಯೆಕ್ಷಗಾನ ಕಲಾವಿದರು ಎಂದು . ಸುಮಾರು ೧೨ ವರ್ಷಗಳಿಂದ ಇಲ್ಲಿ ತಮ್ಮ ಸ್ಟಾಲ್ ನಡೆಸುತ್ತ ಬಂದಿದ್ದಾರೆ . ಯಾಣ ಪ್ರಕೃತಿಯ ಪ್ರಶಾಂತತೆಯಿಂದ ಪ್ಲಾಸ್ಟಿಕ್ ಪೇಪರ್ ಎಸೆಯುವ ಜನಜಾತ್ರೆಯಾಗುವವರೆಗೂ ಎಲ್ಲವನ್ನು ನೋಡಿದ್ದರೆ ಆನಂದ್ ಅವರು .ಅವರ ಸ್ಟಾಲ್ ನಿಂದ ಕಲ್ಲಂಗಡ್ಡಿ ಮತ್ತು ಎಳೆನೀರು ರುಚಿ ಸವೆಯುತ್ತಾ ಅವರಜೊತೆ ನಡೆದ ಮಾತುಕತೆ ಅವಿಸ್ಮರಣೀಯ . ಯಾಣ ಪ್ರಸಿದ್ಧಿ ಪಡೆದು ಅವರ ವ್ಯಾಪಾರ ಬೆಳೆದ ಖುಷಿ ಎಷ್ಟಿದೆಯೋ ಅಷ್ಟೇ ದುಖ್ ಅವರಿಗೆ ಜನ ಪ್ಲಾಸ್ಟಿಕ್ , ಪೇಪರ್ ಎಸೆದು ಮಾಲಿನ್ಯ ಮಾಡುವುದಕ್ಕೂ ಇದೆ .

ಭೈರವೇಶ್ವರ ಶಿಖರದ ಕೆಳಗಡೆ ಗುಹೆಗಳ ಮಾದರಿಯಲ್ಲಿ ಜಾಗವಿದೆ . ಆ ಗುಹೆಗಳ ಒಳಗೆ ಒಂದು ವಿಹಿಂಗಮ ನೋಟ . ಅದರಲ್ಲಿ ಪ್ರತಿಧ್ವನಿಸುವ ಧವ್ನಿನಿಮ್ಮನ್ನ ಮಕ್ಕಳಂತೆ ವಾವ್ , ಹಲೋ ಎಂದು ಕಿರುಚುವಂತೆ ಮಾಡುತ್ತದೆ . ಗುಹೆಯ ಇನ್ನೊಂದು ತುದಿಯನ್ನು ತಲುಪಿದಾಗ ಅಲ್ಲಿಂದ ದಟ್ಟ ಕಾಡು ಹಸಿರು ಹಾಸಿಗೆಯಂತೆ ಕಾಣುತ್ತದೆ .









ಇಡೀ ಶಿಖರವನ್ನು ನೋಡಿಕೊಂಡು ಕೆಳಗಡೆ ಬರುವಷ್ಟರಲ್ಲಿ 12 ಗಂಟೆ ಯಾಗಿತ್ತು. ಅಲ್ಲೇ ಕಾಡಿನ ಮಧ್ಯ , ಪ್ರಶಾಂತವಾಗಿ ಹರಿಯುವ ನೀರಿನ ಪಕ್ಕ ಕೂತು,ಸ್ನಾಕ್ಸ್ ತಿನ್ನುತ್ತಾ ಸುಮಾರು ಹೊತ್ತು ಟೈಂಪಾಸ್ ಮಾಡಿದ್ವಿ . ಮಧ್ಯಾಹ್ನ 2 ಗಂಟೆಗೆ  ಅಲ್ಲಿಂದ ಮತ್ತೆ ಬಸ್ಸು ಹಿಡಿದು ಕುಮಟಾ ಗೆ ವಾಪಸು ಬರುವಷ್ಟರಲ್ಲಿ ನಮ್ಮ ದೇಹ ದಣಿದು ನಿದ್ದೆಗೆ ಜಾರುವಂತಿತ್ತು .
 ಮಾರನೇ ದಿವಸ ನನಗೆ ಆಫೀಸ್ ಇರುವುದರಿಂದ ನಾನು ರವಿವಾರ ಸಂಜೆ ಬೆಂಗಳೂರು ಗೆ ರಿಟರ್ನ್ ಬಸ್ಸು ಹತ್ತಿದೆ . ಅಮಿತ ಇನ್ನು ಕೆಲವು ದಿವಸ ರಜೆ ಇರುವುದರಿಂದ ಊರಲ್ಲೇ ಉಳಿದುಕೊಂಡ.

ಸೊ , ಹೀಗಿತ್ತು ನನ್ನ ಯಾಣ ಪ್ರಯಾಣ . 
ನೀವು ನಿಮ್ಮ ಗೆಳೆಯರ ಜ್ಯೋತೆ ಒಂದು ಸಾರಿ ಯಾಣ ಟ್ರೆಕ್ ಮಾಡಿ . ಒಂದು ದಿವಸ ಪ್ರಕೃತಿಯ ಸುಂದರತೆಯಲ್ಲಿ ಉಸಿರಾಡಿ .

2 comments:

  1. Nice one Loky �� Great pictures ������ waiting for your next blog ��������‍♂️

    ReplyDelete

What life lessons do you learn from trekking?

2016 was tough year for me, i wanted to over come my weaknesses .challenge myself and do something which can genuinely make me happy. I ha...