Wednesday 13 July 2016

थोड़ा टूटा सा हूँ मैं..




थोड़ा टूटा सा हूँ मैं , खुद से ही रूठा सा हूँ मैं ,
खामोशियां है छाई, खुद नहीं जनता कहाँ खो सा गया हूँ मैं .

धुंदलीसी मंजिल है , बहका सा हूँ राहोंमें ,
अब तो चलने से भी डरता , हरबार मै गिरता , ना खुद को संभल पता हूँ मै.

हर कोशिश से कतराता हूँ मै , हर उम्मीद से डरता हूँ मै.
हर हार पे कभी खुद को , तो कभी किस्मत को कोसता हूँ मै.

थोड़ा टूटा सा हूँ मैं , खुद से ही रूठा सा हूँ मैं ,
खामोशियां है छाई, खुद नहीं जनता कहाँ खो सा गया हूँ मैं .

Wednesday 6 July 2016

ಆ ಜಗತ್ತು






ಎಲ್ಲಿ ಅರಳುತ್ತಿವೆ ಹೂವುಗಳು,
ಎಲ್ಲಿವೆ ಆ ನಗುವ ಮುಖಗಳು,
ಎಲ್ಲಿ ಬೀಸುತ್ತಿದೆ ತಂಗಾಳಿಯು,
ಎತ್ತ ನೋಡಿದರತ್ತ ಬಿರುಗಾಳಿಯು,
ಯತ್ತ ಹೋಯಿತು ಆ ಜಗತ್ತು, ಯತ್ತ ಹೋಯಿತು.

ಗಂಗಳದಲ್ಲಿ ರೊಟ್ಟಿ ಇಲ್ಲವಾಯಿತು,
ಅಂಗಳದಲ್ಲಿ ಕೋಳಿ ಕೂಗದೆ ಹೋಯಿತು,
ಬೀಳದೆ ಹೋಯಿತು ಋತುವಿನಲ್ಲಿ ಮಳೆಯು,
ಹಾಡದೆ ಹೋಯಿತು ವಸಂತದಲ್ಲಿ ಕೋಗಿಲೆಯೂ,
ಯತ್ತ ಹೋಯಿತು ಆ ಜಗತ್ತು, ಯತ್ತ ಹೋಯಿತು.

ಮನಗಳಲ್ಲಿ ಮಲಿನತೆ ಮನೆ ಮಾಡಿತು,
ಪ್ರೀತಿ ಕೇವಲ ಮರೀಚಿಕೆಯಾಯಿತು,
ಸಂಶಯದ ಕೀಟ ಹೃದಯ ಹೊಕ್ಕೀ ಕೊರೆಯ ಹತ್ತಿತು.
ಯತ್ತ ಹೋಯಿತು ಆ ಜಗತ್ತು, ಯತ್ತ ಹೋಯಿತು.

ಅರಣ್ಯ ಅಳಿಸಿ ಆಧುನೀಕರಣ ಆಯಿತು,
ತಂತ್ರಜ್ಞಾನ ಬೆಳೆಸಿ ಸಾಮಾನ್ಯ ಜ್ಞಾನ ಆಲಿಸಿತು,
ಪರಿಸರ ಪ್ರೇಮಾ ಪುಸ್ತಕದ ಪಾಠವಾಯಿತು,
ಪ್ರಾಣಿ, ಪಕ್ಷಿ ಮಾನವ ಪರಿವರ್ತನೆಗೇ ಬಲಿಯಾಯಿತು,
ಯತ್ತ ಹೋಯಿತು ಆ ಜಗತ್ತು, ಯತ್ತ ಹೋಯಿತು.



-- ಲೋಕೇಶ ಶಾಸ್ತ್ರೀ.

Tuesday 5 July 2016

ಹೊಸ ಬೆಳಕು

ಗರಿ ಬಿಚ್ಚಿ ಹಾರು ಗಗನದೊಳಗೆ,
ನೀನ್ಯಾಕೆ ಅಡಗಿ ಕೂತೇ ಗೂಡಿನೊಳಗೆ

ನೆನೆದುನೋಡು ತುಂತುರು ಮಳೆಗೆ, 

ನೀನ್ಯಾಕೆ ಅವಿತು ಕೂತೇ ಕೊಡೆಯ ಕೆಳಗೆ.

ತಲೆ ಎತ್ತೀ ನಡೆ ನೀನು ಹೊಳೆವ ಬೆಳಕಿನೆಡೆಗೆ, 

ನೀನ್ಯಾಕೆ ಕಳೆದು ಹೋದೆ ಕಾಣದ ಕತ್ತಲೊಳಗೆ.

ನೂರುಂಟು ದಾರಿ ಸುಂದರ ಗೆಲುವಿಗೆ, 

ನೀನ್ಯಾಕೆ ಕುಗ್ಗುವೆ ಸಣ್ಣ ಸೋಲಿಗೆ.

ಮೂಡಿಸೂ ಮೊಗದಲ್ಲಿ ಮುದ್ದಾದ ಮುಗುಳುನಗೆ, 

ನೀನ್ಯಾಕೆ ನೀರು ಕೊಡುವೆ ಕಂಚಿನ ಕಣ್ಣಂಚಿಗೆ.

ದನಿಗೊಡಿಸು ನೀನು ನನ್ನ ಹಾಡಿಗೆ, 

ನೀನ್ಯಾಕೆ ಮೌನಿಯಾದೆ ಮಾತಿನೊಳಗೆ.

-- ಲೋಕೇಶ ಶಾಸ್ತ್ರೀ.

ಕವನ

ಇದು ಶಬ್ದಗಳ ಸರಮಾಲೆ ಅಲ್ಲ,
ಅಲ್ಲ, ಇದು ವಿಶ್ವದ ಅದ್ಭುತಗಳು ಕಂಡು ಉದ್ಗರಿಸಿದ ಕವನ,
ಇದು ನನ್ನವಳ ನೆನಪಿನ ಭಾವದಲ್ಲಿ ಬೆಂದು ಬಂದ ಪದಪುಂಜಗಳ ಸಮ್ಮಿಲನ.

ಮೂರು ಋತುಗಳ ಮಿಲನ, ಅವಳು ನಾ ಬರೆದ ಕವನ ಸಂಕಲನ,
ಹುಡುಗಿಯಲ್ಲ ಅವಳು, ಆ ಕಾಮನ ಬಿಲ್ಲಿನ ಬಣ್ಣ.

ಮಾತನಾಡದ ಅವಳ ಆ ಪ್ರಶಾಂತ ಮೌನ,
ಮದತುಂಬಿದ ಆ ಸುಂದರ ನಯನ,
ಗಾಳಿಯ ಜೊತೆ ಆ ಕೇಶಗಳ ತುಂಟತನ,
ಪ್ರತಿಕ್ಷಣ ಕಾಡುವ ಆ ರೆಪ್ಪೆಗಳ ಮಿಲನ.


ಆ ಕಂಚಿನ ಕಂಗಳ ಹೊಳಪು,
ಆ ಗಲ್ಲದ ಗೂಳಿಯ ಬಿಳುಪು,
ಆ ಬಿಂಕದ ನಡಿಗೆಗೇ ಸೋತಿದೆ ನನ್ನ ಮನ.

ನನ್ನವಳ ಮಾತು ಮೌನ ಎಲ್ಲ ಚೆನ್ನ,
ಅವಳಿಗಾರ್ಪಣ ಈ ಸಣ್ಣ ಕವನ.

--ಲೋಕೇಶ್ ಶಾಸ್ತ್ರೀ

Monday 4 July 2016

ಕರುನಾಡು

ಬೀದರ್ ರೊಟ್ಟಿ-ಚಟ್ನಿ ಇಂದ
ಡಾವಣಗೆರೆ ಬೆಣ್ಣೆದೋಸೆ ವರೆಗೂ...

ಹಳೇ ಕೋಟೆಗಳಿಂದ
ಮಾಡರ್ನ್ ಮೊಲ್ಲ್ಗಳ ವರೆಗೂ...

ಮೇಜರ್ ಕರೀಯಪ್ಪರಿಂದ
ವೀರ ಉನ್ನಿಕೃಷ್ಣನ್ ವರೆಗೂ...

ಪ್ರಕಾಶ್ ಪಡುಕೋಣೆ ಇಂದ
ಪಂಕಜ್ ಅಡ್ವಾಣಿ ವರೆಗೂ...

ಸರ್ಕಾರಿ ಶಾಲೆ ಅಂಗಳದಿಂದ
IIM ಕ್ಯಾಂಪಸ್ ವರೆಗೂ...

ಉತ್ತರದ ಕಾರಂಜಾ ಇಂದ
ದಕ್ಷಿಣದ ಕಾವೇರಿ ವರೆಗೂ...

ಮುತ್ತಿನ ಕಥೆ ಇಂದ
ಮುಂಗಾರು ಮಳೆಯ ವರೆಗೂ...

ಕುವೆಂಪು ಇಂದ
ಕಯ್ಕೇಣಿ ವರೆಗೂ...

ಕನ್ನಡ ಅದ್ಭುತ.

-ಲೋಕೇಶ್ ಶಾಸ್ತ್ರಿ

ಅಮ್ಮಾ


ಅಮ್ಮ , ಹೇಗೆ ಬಣ್ಣಿಸಲಿ ನಿನ್ನ ಪ್ರೇಮ
ಕೊನೆಯಿಲ್ಲದ ಪ್ರೀತಿ ನೀನು ,
ಈ ಬದುಕಿಗೇ ಸ್ಪೂರ್ತಿ ನೀನು. 

ನಿದ್ದೆ ಬಾರದೇ ಚಡಪಡಿಸುವಗ,
ಮಡಿಲಲ್ಲಿ ಮಲಗಿಸಿ ಮುತ್ತು ಕೊಟ್ಟವಳು ನೀನು.

ನಾನು,ನೀನು,ಅವನು,ಅವಳುಗಳ ಮಧ್ಯದಲ್ಲಿ ವದ್ದಡುವಾಗ್,
ನನ್ನಲ್ಲಿರುವ ನನ್ನತನವನ್ನು ಪರಿಚಯಿಸಿದವಳು ನೀನು.

ನಿನ್ನ ಕೋಪವೂ ಪ್ರೀತಿಯ ಪ್ರತೀಕ ,
ನನ್ನ ನಗುವಿನಲ್ಲಿ,ನಿನ್ನ ಖುಷಿ ಕಾಣುವ ತವಕ,
ನೀನು ಕೊಟ್ಟ ಪ್ರೀತಿಗೇ ನಾನು ಭಾವುಕ.

ವೋಮ್ಮೊಮ್ಮೆ ಅನಿಸುವುದು,
ಮತ್ತೇ ಮರಳಿ ಊರಿಗೇ ಬರಬೇಕು,
ನಿನ್ನ ಕಯ್ಯಾರೇ ಉಪ್ಪಿಟ್ಟು,ದೋಸೇ ತಿನ್ನಬೇಕು,
ಇನ್ನೊಂದು ಜನ್ಮ ಎಂದಾದರೆ ಮತ್ತೇ ನಿನ್ನ ಮಗನಾಗೀ ಹುಟ್ಟಬೇಕು.


--ಲೋಕೇಶ್ ಶಾಸ್ತ್ರೀ .

What life lessons do you learn from trekking?

2016 was tough year for me, i wanted to over come my weaknesses .challenge myself and do something which can genuinely make me happy. I ha...