Sunday 12 February 2017

ಕಡಲು





ಕಡಲು ಬೀಸೋ  ಗಾಳಿಗೆ ಕವಿತೆ ಒಂದು ಮೂಡಿದೆ !
ನೆನಪಿನ ಅಲೆಯ ರಭಸಕೆ ಭಾವ ಬಂದು ದಡಸೇರಿದೆ !!

ಕಾಣದ ಕಡಲಲ್ಲಿ ನೀನೇನು ಹುಡುಕುತ್ತಿರುವೆ ಹುಚ್ಚು ಮನಸೇ ,
ನಿನದಲ್ಲದ  ದೋಣಿ ಅದು, ಮರೆತು ಬಿಡು ಮರಳಿ ಬರುವ ಭರವಸೆ . 

ಕಳೆದು ಹೋದ ದೋಣಿ ನಿನ್ನ ಪಯಣದ ಅಂತ್ಯವಲ್ಲ . 

ಬಿಟ್ಟುಬಿಡು ಅಲೆಯ ಹುಟ್ಟು, ಕಡಲ ಕಡೆಯ ಕಾಣುವ ತವಕ ,
ಮರೆಯಬೇಡ , ನಿನಗು ಒಂದು  ದೋಣಿ ಇದೆ ,ನೀನು ಒಬ್ಬ ನಾವಿಕ . 

ಹತ್ತು ನಿನ್ನ ಹಡಗನ್ನು, 
ತಳ್ಳು ನೆನಪಿನ ಅಲೆಗಳನ್ನು ,
ದೋಣಿ ಮುಂದೆ ಸಾಗಲಿ ,
ಬದುಕು ಹೊಸದೊಂದು ದಡ ಸೇರಲಿ . 

ಕಡಲು ಬೀಸೋ  ಗಾಳಿಗೆ ಕವಿತೆ ಒಂದು ಮೂಡಿದೆ !
ನೆನಪಿನ ಅಲೆಯ ರಭಸಕೆ ಭಾವ ಬಂದು ದಡಸೇರಿದೆ !!




2 comments:

What life lessons do you learn from trekking?

2016 was tough year for me, i wanted to over come my weaknesses .challenge myself and do something which can genuinely make me happy. I ha...