Tuesday 5 July 2016

ಕವನ

ಇದು ಶಬ್ದಗಳ ಸರಮಾಲೆ ಅಲ್ಲ,
ಅಲ್ಲ, ಇದು ವಿಶ್ವದ ಅದ್ಭುತಗಳು ಕಂಡು ಉದ್ಗರಿಸಿದ ಕವನ,
ಇದು ನನ್ನವಳ ನೆನಪಿನ ಭಾವದಲ್ಲಿ ಬೆಂದು ಬಂದ ಪದಪುಂಜಗಳ ಸಮ್ಮಿಲನ.

ಮೂರು ಋತುಗಳ ಮಿಲನ, ಅವಳು ನಾ ಬರೆದ ಕವನ ಸಂಕಲನ,
ಹುಡುಗಿಯಲ್ಲ ಅವಳು, ಆ ಕಾಮನ ಬಿಲ್ಲಿನ ಬಣ್ಣ.

ಮಾತನಾಡದ ಅವಳ ಆ ಪ್ರಶಾಂತ ಮೌನ,
ಮದತುಂಬಿದ ಆ ಸುಂದರ ನಯನ,
ಗಾಳಿಯ ಜೊತೆ ಆ ಕೇಶಗಳ ತುಂಟತನ,
ಪ್ರತಿಕ್ಷಣ ಕಾಡುವ ಆ ರೆಪ್ಪೆಗಳ ಮಿಲನ.


ಆ ಕಂಚಿನ ಕಂಗಳ ಹೊಳಪು,
ಆ ಗಲ್ಲದ ಗೂಳಿಯ ಬಿಳುಪು,
ಆ ಬಿಂಕದ ನಡಿಗೆಗೇ ಸೋತಿದೆ ನನ್ನ ಮನ.

ನನ್ನವಳ ಮಾತು ಮೌನ ಎಲ್ಲ ಚೆನ್ನ,
ಅವಳಿಗಾರ್ಪಣ ಈ ಸಣ್ಣ ಕವನ.

--ಲೋಕೇಶ್ ಶಾಸ್ತ್ರೀ

No comments:

Post a Comment

What life lessons do you learn from trekking?

2016 was tough year for me, i wanted to over come my weaknesses .challenge myself and do something which can genuinely make me happy. I ha...