Wednesday 6 July 2016

ಆ ಜಗತ್ತು






ಎಲ್ಲಿ ಅರಳುತ್ತಿವೆ ಹೂವುಗಳು,
ಎಲ್ಲಿವೆ ಆ ನಗುವ ಮುಖಗಳು,
ಎಲ್ಲಿ ಬೀಸುತ್ತಿದೆ ತಂಗಾಳಿಯು,
ಎತ್ತ ನೋಡಿದರತ್ತ ಬಿರುಗಾಳಿಯು,
ಯತ್ತ ಹೋಯಿತು ಆ ಜಗತ್ತು, ಯತ್ತ ಹೋಯಿತು.

ಗಂಗಳದಲ್ಲಿ ರೊಟ್ಟಿ ಇಲ್ಲವಾಯಿತು,
ಅಂಗಳದಲ್ಲಿ ಕೋಳಿ ಕೂಗದೆ ಹೋಯಿತು,
ಬೀಳದೆ ಹೋಯಿತು ಋತುವಿನಲ್ಲಿ ಮಳೆಯು,
ಹಾಡದೆ ಹೋಯಿತು ವಸಂತದಲ್ಲಿ ಕೋಗಿಲೆಯೂ,
ಯತ್ತ ಹೋಯಿತು ಆ ಜಗತ್ತು, ಯತ್ತ ಹೋಯಿತು.

ಮನಗಳಲ್ಲಿ ಮಲಿನತೆ ಮನೆ ಮಾಡಿತು,
ಪ್ರೀತಿ ಕೇವಲ ಮರೀಚಿಕೆಯಾಯಿತು,
ಸಂಶಯದ ಕೀಟ ಹೃದಯ ಹೊಕ್ಕೀ ಕೊರೆಯ ಹತ್ತಿತು.
ಯತ್ತ ಹೋಯಿತು ಆ ಜಗತ್ತು, ಯತ್ತ ಹೋಯಿತು.

ಅರಣ್ಯ ಅಳಿಸಿ ಆಧುನೀಕರಣ ಆಯಿತು,
ತಂತ್ರಜ್ಞಾನ ಬೆಳೆಸಿ ಸಾಮಾನ್ಯ ಜ್ಞಾನ ಆಲಿಸಿತು,
ಪರಿಸರ ಪ್ರೇಮಾ ಪುಸ್ತಕದ ಪಾಠವಾಯಿತು,
ಪ್ರಾಣಿ, ಪಕ್ಷಿ ಮಾನವ ಪರಿವರ್ತನೆಗೇ ಬಲಿಯಾಯಿತು,
ಯತ್ತ ಹೋಯಿತು ಆ ಜಗತ್ತು, ಯತ್ತ ಹೋಯಿತು.



-- ಲೋಕೇಶ ಶಾಸ್ತ್ರೀ.

No comments:

Post a Comment

What life lessons do you learn from trekking?

2016 was tough year for me, i wanted to over come my weaknesses .challenge myself and do something which can genuinely make me happy. I ha...