![]() |
ಕಡಲು ಬೀಸೋ ಗಾಳಿಗೆ ಕವಿತೆ ಒಂದು ಮೂಡಿದೆ !
ನೆನಪಿನ ಅಲೆಯ ರಭಸಕೆ ಭಾವ ಬಂದು ದಡಸೇರಿದೆ !!
ಕಾಣದ ಕಡಲಲ್ಲಿ ನೀನೇನು ಹುಡುಕುತ್ತಿರುವೆ ಹುಚ್ಚು ಮನಸೇ ,
ನಿನದಲ್ಲದ ದೋಣಿ ಅದು, ಮರೆತು ಬಿಡು ಮರಳಿ ಬರುವ ಭರವಸೆ .
ಕಳೆದು ಹೋದ ದೋಣಿ ನಿನ್ನ ಪಯಣದ ಅಂತ್ಯವಲ್ಲ .
ಬಿಟ್ಟುಬಿಡು ಅಲೆಯ ಹುಟ್ಟು, ಕಡಲ ಕಡೆಯ ಕಾಣುವ ತವಕ ,
ಮರೆಯಬೇಡ , ನಿನಗು ಒಂದು ದೋಣಿ ಇದೆ ,ನೀನು ಒಬ್ಬ ನಾವಿಕ .
ಹತ್ತು ನಿನ್ನ ಹಡಗನ್ನು,
ತಳ್ಳು ನೆನಪಿನ ಅಲೆಗಳನ್ನು ,
ದೋಣಿ ಮುಂದೆ ಸಾಗಲಿ ,
ಬದುಕು ಹೊಸದೊಂದು ದಡ ಸೇರಲಿ .
ಕಡಲು ಬೀಸೋ ಗಾಳಿಗೆ ಕವಿತೆ ಒಂದು ಮೂಡಿದೆ !
ನೆನಪಿನ ಅಲೆಯ ರಭಸಕೆ ಭಾವ ಬಂದು ದಡಸೇರಿದೆ !!
Good one @loky👍
ReplyDeleteThank you Amith :)
Delete