Saturday 6 May 2017

ಸೋಲು


ಈ ನನ್ನ ಬರವಣಿಗೆ ಸೋಲನ್ನು ಪ್ರೋತ್ಸಾಹಿಸುವುದಕ್ಕಾಗಲಿ  ಅಥವಾ ಸೋಲನ್ನು ಸಮರ್ಥಿಸಿಕೊಳ್ಳುವುದಕ್ಕಾಗಲಿ ಅಲ್ಲ .
ನಾವು ಬೆಳೆಯುತ್ತಿರುವ ಇ ಆಧುನಿಕ  ಸಮಾಜ ನಮಗೆ ಗೆಲುವೇ ಮಹತ್ವದ್ದು , ಸೋಲು ಪಯಣದ ಅಂತ್ಯ ಎಂದು ಕಲಿಸುತ್ತಿದೆ . ನಾನು ಇಲ್ಲಿ ಸೋಲನ್ನು ಹೊಸ ದೃಷ್ಟಿಯಿಂದ ಬಿಂಬಿಸಲು ಪ್ರಯತ್ನಿಸುತ್ತಿದ್ದೇನೆ .

ನಮಗೆಲ್ಲರಿಗೂ ಗೆಲುವೇ ಬೇಕು, ಸೋಲು ಯಾರಿಗೂ ಯಾವುದೇ ಕಾರಣಕ್ಕೂ ಬೇಡ . ವಿಪರ್ಯಾಸ ಏನು ಎಂದರೆ , ಗೆಲುವಿಗಿಂತ ಜಾಸ್ತಿ ಬದುಕಲ್ಲಿ ಬೆಳೆಯಲು ಸಹಕರಿಸುವುದೇ  ಸೋಲು.

ನೀವು ಎಂದಾದರೂ ಯೋಚಿಸಿದ್ದೀರಾ ಸೊಲೇಕೆ ಹೀಗೆ ಎಂದು ,

ಗೆಲುವಿನಂತೆ  ಜಟಿಲವಲ್ಲ ಸೋಲು ,ಸೋಲು ತುಂಬಾ ಸರಳ . ಸೋಲನ್ನು ನಾವು ಸ್ವಲ್ಪ ಪ್ರೀತಿಸಬೇಕು
ಏಕೆಂದರೆ,  ಸೋಲು ಬದುಕಿಗೆ  ದಾರಿ ತೋರಲು ಹಿಡಿದ ಟಾರ್ಚಿನಂತೆ .
 ಗೆಲುವು ಸದ್ದು, ಗದ್ದಲ , ಅಬ್ಬರದ ಜೊತೆ ಬರುತ್ತದೆ . ಸೋಲು ಹಾದು ಹೋದಾಗ ಮನಸ್ಸು ಮೌನಿಯಾಗುತ್ತದೆ .

ಸೋಲಲ್ಲಿ ಏನೋ ಒಂದು ಸತ್ಯ ಅಡಗಿದೆ ,ಸೋಲು ಕನ್ನಡಿಯಂತೆ .
ಗೆಲುವು ಅಪರಿಚಿತರನ್ನು ಪರಿಚಯಿಸಿದರೆ , ಸೋಲು ತನ್ನಲ್ಲಿರುವ ತನ್ನತನವನ್ನು ತೋರಿಸುತ್ತದೆ

ಒಂದು ಅರ್ಥದಲ್ಲಿ ನೋಡಿದರೆ ಗೆಲುವನ್ನು ಕೆತ್ತುವ ಶಿಲ್ಪಿಯೇ ಸೋಲು. ಸೋಲುಗಳ ನಂತರ ಹುಟ್ಟಿದ ಗೆಲುವಿನ ಬಾಳಿಕೆಯೂ ಗೆಲುವಿನ ಕೈಹಿಡಿದು ಬೆಳೆದ ಗೆಲುವಿಗಿಂತ ಜಾಸ್ತಿ .

ಗೆಲುವಿನ ಅಮಲು  ಕೆಲವುಬಾರಿ ಗರ್ವ ತರುತ್ತದೆ ಆದರೆ ಸೋಲಿನ ಆ ನೋವು ತಿದ್ದಿಕೊಂಡು ಬೆಳೆಯಲು ಅವಕಾಶ ಕೊಡುವ ಆಕಾಶದಂತೆ .ಸೋಲು ಕಲಿಸುವ ಪಾಠ ಗೆಲುವಿನ ಪೂರ್ವಸಿದ್ಧತೆ ಪುಸ್ತಕದಲ್ಲಿ ಕಾಣಸಿಗುವುದಿಲ್ಲ .ಪ್ರತಿ ಸೋಲು, ನೀರಿಕ್ಷೆಗಳ ಭಾರ ಇಳಿಸಿ, ಬದುಕನ್ನು ಹೊಸ ಗುರಿಯ ಆರಂಭ ಗೆರೆಯಲ್ಲಿ ನಿಲ್ಲಿಸುತ್ತದೆ .
ಸೋಲಿನಿಂದ ಹೆದರುದಕಿಂತ ,ಸೋಲನ್ನು ಅನುಭವಿಸಬೇಕು ,ಅವಲೋಕಿಸಬೇಕು ಆದರಿಂದು ದೊರೆತ ಕಲಿಕೆಯಿಂದ ಗೆಲುವೆಂಬ ಗುರಿ ಮುಟ್ಟಬೇಕು .

ಇಲ್ಲಿ ನಾನು ಗೆಲುವಿಗಿಂತ ಸೋಲೇ ಮುಖ್ಯ , ಎಲ್ಲರೂ ಸೋಲಿಗಾಗಿ ಪ್ರಯತ್ನಿಸಬೇಕು ಅಥವಾ ನನಗೆ ಸೋಲು ಎಂದರೆ ತುಂಬಾ ಪ್ರೀತಿ ಎಂದು ಹೇಳಲು ಹೊರಟಿಲ್ಲ . ನಾನು ಹೇಳುವುದೇನೆಂದರೆ , ಸೋಲನ್ನು ಅಷ್ಟು ದ್ವೇಷಿಸುವುದಾಗಲಿ ಅಥವಾ ಸೋತವರನ್ನು ಹೀಯಾಳಿಸುವುದಾಗಲಿ ಸರಿಯಲ್ಲ .

ನೆನಪಿರಲಿ , ಗೆಲುವಿನ ಪ್ರಾಮುಖ್ಯತೆಯು ಸೋಲಿನ ಅಸ್ತಿತ್ವದಲ್ಲಿ ಅಡಗಿದೆ.

No comments:

Post a Comment

What life lessons do you learn from trekking?

2016 was tough year for me, i wanted to over come my weaknesses .challenge myself and do something which can genuinely make me happy. I ha...